ವಸಂತ ಕಾಲದ ಕಣ್ಣಿನಲ್ಲಿ ಹಸಿರುನಿಸುವ ಹೆಸರು ನಿನ್ನದು
ಪ್ರತಿ ಉಸಿರಿನಲ್ಲೂ ಪಸರಿಸುವ ನಗೆಯು ನಿನ್ನದು
ಈ ಹಸಿರು ಹೆಸರಿನ ಉಸಿರಿನಲ್ಲಿ .. ಪಸರಿಸುವ ನಗೆಯು
ಸದಾ ಶಾಶ್ವಥವಿರಲಿ ಎಂಬ ಹಾರೈಕೆ ನನ್ನದು
ಕಂಚು ಕೂಡ ನಾಚುವಂಥ ಮಿಂಚು ನೋಟ ನಿನ್ನದು
ಒಂದಿಂಚು ಸಂಚಿಲ್ಲದ ಮಗುವಿನntha ಮಾತು ನಿನ್ನದು
ಈ ಮಿಂಚಿನಂಥ ನೋಟದಲ್ಲಿ, ಸಂಚಿಲ್ಲದ ಮಾತು...
ಸದಾ ಶಾಶ್ವಥವಿರಲಿ ಎಂಬ ಹಾರೈಕೆ ನನ್ನದು
ಪುಟ್ಟ ಪುಟ್ಟ ಹೆಜ್ಜೆ ಇದುತ , ಪುತಿದಡುವ ಮನಸು ನಿನ್ನದು
ಕಟ್ಟಾಕಡೆಯ ಕಾರ್ಯವದರು , ಪೂರೈಸುವ ಹುಮ್ಮಸ್ಸು ನಿನ್ನದು
ಈ ಪುತಿದಾಡುವ ಮನಸೊಳಗೆ, ಮಿಡಿಯುತಿರುವ ಹುಮ್ಮಸ್ಸು
ಸದಾ ಶಾಶ್ವಥವಿರಲಿ ಎಂಬ ಹಾರೈಕೆ ನನ್ನದು
ನಾ ಹಾರೈಸುವ ಈ ಎರಡು..
ನೀ ಕಂಡಂಥ ಕನಸುಗಳು ಚೂರಾದರು,ನೀ ಕಾಣುವ ಕನಸುಗಳು ಕೊನೆಯಾಗದಿರಲಿ
ವಸಂತ ಕಾಲದ ಹುರುಪು ಮುಗಿದರು , ಈ ವಸಂತ ಸದಾ ಹಸಿರಾಗಿರಲಿ
ಎಂದೆಂದೂ ನಗುತಿರಲಿ..
Roshan OK
1 comment:
good Imagination and nice thoughts :)
Post a Comment