ನನ್ನವಳು ರಾತ್ರಿಯಲ್ಲ ನಿನ್ನನೆ ನೆನೆಯುವೆ
ಹಗಲೆಲ್ಲ ನಿನ್ನನೆ ಬಯಸುವೆ
ನನ್ನ ನೋಡಿ ನಿನಗೆ ದಯೆ ಬಾರದೆ
ನನ್ನಲ್ಲಿ ನಿಂತು ನನ್ನ ಗೆದ್ದ ಒಡತಿಯೇ
ನಿನ್ನ ನೋಡುವ ತವಕದಲ್ಲಿರುವೆ ನಾ ಇಂದು
ನಿನ್ನ ನಗುವ ಕಾಣುವ ಬಯಕೆ ಆಗಿದೆ ಈಗ
ನಿನ್ನ ಹೊರತು ಈ ಬಾಳು ಬರಡಾಗಿದೆ
ನನ್ನೀ ಬಯಕೆಯ ಈದೆರಿಸುವೆ ಯಾವಾಗ???
ನನ್ನಲಿ ಬೆರೆತು ಮರೆಯಾಗಿರುವ
ನನ್ನಲೇ ನಿಂತು ಜೊತೆಗೆ ನಡೆಯದಿರುವ
ದಿನವು ನನ್ನ ಕನಸಲ್ಲಿ ಚುಂಬಿಸುವನ
ನ್ನವಳೇ ನೀನೆಲ್ಲಿ ಇರುವೆ
ಮರೆತರು ಮರೆಯಾಗದೆ ಮರಳುವವಳೇ
ಮನದಲ್ಲೇ ಮನೆಮಾಡಿ ಮಾತಾಡುವವಳೇ
ಮೌನದಲ್ಲಿ ಮನದೊಡನೆ ಮರಗುವವಳೇ
ಮರಳಿ ಬರುವೆಯ ನನ್ನವಳೇ........?
--------------ಇಂತಿ
ಈಶಾವಾಸ್ಯ
1 comment:
Hats off..premi..
Post a Comment